IV. ಲಗೇಜ್/ ಸರಕುಗಳನ್ನು ಸಾಗಿಸುವಾಗ ಅನ್ವಯಿಸುವ ಷರತ್ತು ಮತ್ತು ನಿಬಂಧನೆಗಳು:
- ನಿಗಮವು ಯಾವುದೇ ಲಗೇಜ್ನ್ನು ಅನುಮತಿಸುವ/ನಿರಾಕರಿಸುವ ಹಕ್ಕನ್ನು ಹೊಂದಿರುತ್ತದೆ.
- ಸ್ಥಳಾವಕಾಶದ ಲಭ್ಯತೆ ಮೇರೆಗೆ ಪ್ಯಾಕಿಂಗ್ ಸ್ಥಿತಿಯಲ್ಲಿರುವ ಲಗೇಜ್ನ್ನು ಅನುಮತಿಸಲಾಗುವುದು.
- ಆಕ್ರಮಣಕಾರಿ, ನಿಷಿದ್ಧ, ಸ್ಪೋಟಕ, ಸುಲಭವಾಗಿ ಹೊತ್ತಿಕೊಳ್ಳುವ ಪದಾರ್ಥಗಳು ಅಥವಾ ಇತರೆ ಅಪಾಯಕಾರಿ ವಸ್ತುಗಳನ್ನು ಪ್ರಯಾಣಿಕರ ಹಿತದೃಷ್ಟಿಯಿಂದ ಕೊಂಡೊಯ್ಯಲು ಅವಕಾಶವಿಲ್ಲ.
- ಸರಕುಗಳು ಹಾಳಾದಲ್ಲಿ, ಅನಿರೀಕ್ಷಿತ ಘಟನೆಗಳಿಂದ/ಅಪಘಾತಗಳಿಂದ ಲಗೇಜ್ ಕಳವು, ಹಾನಿಯುಂಟಾದಲ್ಲಿ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
- ಲಗೇಜ್ನಲ್ಲಿರುವ ವಸ್ತುಗಳ ಬಗ್ಗೆ ಗುಮಾನಿ ಬಂದಲ್ಲಿ, ನಿಗಮದ ಸಿಬ್ಬಂದಿಗಳು ಪರಿಶೀಲನೆ ನಡೆಸುವ ಅಧಿಕಾರ ಹೊಂದಿರುತ್ತದೆ.
- ಸ್ಥಳಾವಕಾಶದ ಲಭ್ಯತೆ ಮೇರೆಗೆ ಲಗೇಜ್ ಕೊಂಡೊಯ್ಯಲು ಅವಕಾಶ ನೀಡುವ ನಿಯಮಾವಳಿಗೊಳಪಟ್ಟಿದೆ. ಪ್ರಯಾಣಿಕರು ಅಥವಾ ನಿಗಮದ ಸಿಬ್ಬಂದಿಗಳು ಚಲಿಸಲು ಅನಾನುಕೂಲವಾಗುವ ರೀತಿಯಲ್ಲಿ ಮತ್ತು ಚಾಲಕರ ಕ್ಯಾಬಿನ್ನಲ್ಲಿ ಯಾವುದೇ ಸಂದರ್ಭಗಳಲ್ಲಿಯೂ ಲಗೇಜ್ ಕೊಂಡೊಯ್ಯುವಂತಿಲ್ಲ.
- ಬಸ್ಸಿನಲ್ಲಿ ಕೊಂಡೊಯ್ಯುತ್ತಿರುವ ಲಗೇಜ್ಗೆ ಮೊದಲ ಸ್ಥಳದಲ್ಲಿಯೇ ದರ ವಿಧಿಸದೇ ಲಗೇಜ್ ಚೀಟಿಯನ್ನು ಪಡೆಯದಿದ್ದಲ್ಲ್ಲಿ, ನಿರ್ದಿಷ್ಟ ಲಗೇಜ್ನ ದರದ ಎರಡು ಪಟ್ಟು ದಂಡವನ್ನು ಪ್ರಯಾಣಿಕರಿಗೆ ವಿಧಿಸುವುದು.
Last updated date 01-11-2019 03:15 AM